ನವದೆಹಲಿ: ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮಾತುಕತೆ ಬಳಿಕ ಉಭಯ ದೇಶಗಳು ಎಂಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಒಪ್ಪಂದಗಳಿಗೆ ಸಹಿ ಹಾಕಿವೆ.
ಆರೋಗ್ಯ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ, ಉಪಗ್ರಹ ಸಂವಹನ ಜಾಲ ಮತ್ತು ಸಾಮರ್ಥ್ಯ ವೃದ್ಧಿ ತರಬೇತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಿಗೆ ನೀಡಲಾಗಿದೆ. ನೇಪಾಳಕ್ಕೆ 24,000 ಕೋಟಿ ನೇಪಾಳಿ ರೂಪಾಯಿ ಅಭಿವೃದ್ಧಿ ನೆರವು ಘೋಷಿಸಲಾಗಿದೆ.

ಗಡಿ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನೇಪಾಳದ ಸರಕು ಸಾಗಣೆಗೆ ಭಾರತೀಯ ಬಂದರುಗಳ ಬಳಕೆ ವಿಸ್ತರಣೆಗೆ ನಿರ್ಧರಿಸಲಾಗಿದೆ. ಅಯೋಧ್ಯೆ ಮತ್ತು ಜನಕಪುರ ನಡುವೆ ಸರಯು-ಕಮಲಾ ಎಕ್ಸ್ಪ್ರೆಸ್ ರೈಲು ಸೇವೆಯನ್ನೂ ಘೋಷಿಸಲಾಗಿದೆ.
ಉಭಯ ದೇಶಗಳು ಭವಿಷ್ಯದ ಪಾಲುದಾರಿಕೆಗೆ ಜಂಟಿ ದೃಷ್ಟಿಕೋನ ದಾಖಲೆಯನ್ನು ಅಂಗೀಕರಿಸಿವೆ. ಭಾರತ-ನೇಪಾಳ ಸಂಬಂಧಗಳು ಹಂಚಿಕೊಂಡ ಇತಿಹಾಸ, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳಿಂದ ಬೆಸೆದುಕೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದರು.
